ಮೈಸೂರು: ಪ್ರಯಾಣಿಕರಿಗೊಂದು ಸಂತಸದ ಸುದ್ದಿ. ಅರಮನೆ ನಗರಿ ಮೈಸೂರು ಹಾಗೂ ಮಂಗಳೂರು ನಡುವೆ ಏರ್ ಇಂಡಿಯಾ ಅಲಯನ್ ಏರ್ ಸಂಸ್ಥೆಯ ವಿಮಾನ ಸೇವೆ ಆರಂಭವಾಗಲಿದೆ.
ಡಿಸೆಂಬರ್ 10ರಿಂದ ಮೈಸೂರು-ಮಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಲಿದ್ದು, ವಾರದ ನಾಲ್ಕು ದಿನ ವಿಮಾನ ಸೇವೆ ಲಭ್ಯವಾಗಲಿದೆ. ಅಂದರೆ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಸೇವೆ ಇರಲಿದೆ.
ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಶೀಘ್ರದಲ್ಲಿಯೇ ಉಡಾನ್ ಯೋಜನೆಯಡಿಯಲ್ಲಿ ಮೈಸೂರಿನಿಂದ ಹಲವು ನಗರಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇನ್ನಷ್ಟು ವಿಮಾನ ಹಾರಾಟ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.