ಪೇಟಿಎಂ, ಭಾರತೀಯ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಪೇಟಿಎಂ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಕ್ರೆಡಿಟ್ ಕಾರ್ಡ್ ವಿಶೇಷವೆಂದ್ರೆ ಪ್ರತಿ ಖರೀದಿಯಲ್ಲೂ ಕ್ಯಾಶ್ಬ್ಯಾಕ್ ನೀಡ್ತಿದೆ ಕಂಪನಿ.
ನೆಕ್ಸ್ಟ್ ಜನರೇಷನ್ ಕ್ರೆಡಿಟ್ ಕಾರ್ಡ್ ಇದಾಗಿದೆ ಎಂದು ಪೇಟಿಎಂ ಹೇಳಿದೆ. ಮುಂದಿನ 12-18 ತಿಂಗಳೊಳಗೆ 20 ಲಕ್ಷ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ. ಕ್ರೆಡಿಟ್ ಕಾರ್ಡ್ ನೊಂದಿಗೆ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಅಪ್ಲಿಕೇಷನ್ ಮೂಲಕ ಕ್ರೆಡಿಟ್ ಕಾರ್ಡ್ ಪಿನ್ ಬದಲಿಸಬಹುದು. ವಿಳಾಸ ನವೀಕರಿಸಬಹುದು. ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಬಹುದು.
ಕಾರ್ಡ್ ನಿಂದಾಗುವ ವಂಚನೆ ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಿಮೆ ಸೌಲಭ್ಯವನ್ನು ನೀಡಲಾಗಿದೆ. ಕ್ಯಾಶ್ ಬ್ಯಾಕ್, ಗಿಫ್ಟ್ ವೋಚರ್ ರೂಪದಲ್ಲಿರುತ್ತದೆ. ಗ್ರಾಹಕರ ಹಿನ್ನಲೆ ಹಾಗೂ ಅವ್ರ ವಹಿವಾಟು, ಮಾರಾಟದ ವಿವರವನ್ನು ಪರಿಶೀಲಿಸಿ ನಂತ್ರ ಕ್ರೆಡಿಟ್ ಕಾರ್ಡ್ ನೀಡುತ್ತದೆ. ಅಪ್ಲಿಕೇಷನ್ ಪ್ರಕ್ರಿಯೆ ಆನ್ಲೈನ್ ಆಗಿರುತ್ತದೆ.