ಯುಎಸ್ ಡಾಲರ್ ಬಲವರ್ಧನೆಯಿಂದಾಗಿ ಭಾರತೀಯ ರೂಪಾಯಿ ದುರ್ಬಲಗೊಂಡಿದೆ. ಇದರ ಪರಿಣಾಮ ಇಂದು ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆ ಕಂಡಿದೆ. ದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 122 ರೂಪಾಯಿ ಏರಿದೆ. ಬೆಳ್ಳಿ ಬೆಲೆ 340 ರೂಪಾಯಿ ಹೆಚ್ಚಾಗಿದೆ.
ವಿಶ್ವದಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಯುಎಸ್ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಇದು ಬೆಲೆ ಏರಿಕೆಗೆ ಕಾರಣವೆಂದು ತಜ್ಞರು ಹೇಳಿದ್ದಾರೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಶೇಕಡಾ 99.9 ರಷ್ಟು ಶುದ್ಧ ಚಿನ್ನದ ಬೆಲೆ ಹತ್ತು ಗ್ರಾಂಗೆ 51,989 ರೂಪಾಯಿಯಾಗಿದೆ. ಸೋಮವಾರ 10 ಗ್ರಾಂ ಬಂಗಾರದ ಬೆಲೆ 51,867 ರೂಪಾಯಿಯಿತ್ತು.
ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಮಂಗಳವಾರ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ಹತ್ತು ಗ್ರಾಂಗೆ 69,665 ರೂಪಾಯಿಯಾಗಿದೆ. ಸೋಮವಾರ ಇದ್ರ ಬೆಲೆ 69,325 ರೂಪಾಯಿಯಿತ್ತು.