ಹೊಸ ವರ್ಷಾರಂಭದಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ಬಂಗಾರದ ಬೆಲೆ 10 ಗ್ರಾಂಗೆ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಇಂದು ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 877 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಏರಿಕೆ ಕಂಡು ಬಂದಿದೆ. ಕೆ.ಜಿ ಬೆಳ್ಳಿ ಬೆಲೆ 2,012 ರೂಪಾಯಿ ಹೆಚ್ಚಾಗಿದೆ.
ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 49,742 ರೂಪಾಯಿಯಾಗಿತ್ತು. ಬೆಳ್ಳಿ ಕೆಜಿಗೆ 67,442 ರೂಪಾಯಿಯಾಗಿತ್ತು. ಡಾಲರ್ ದುರ್ಬಲಗೊಂಡ ಕಾರಣ ಚಿನ್ನದ ಬೆಲೆ ಏರಿಕೆ ಕಂಡಿದೆ. ಇಂದು 877 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ 10 ಗ್ರಾಂಗೆ 50,619 ರೂಪಾಯಿಯಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,935 ಡಾಲರ್ ಪ್ರತಿ ಔನ್ಸ್ ಆಗಿದೆ. ಇನ್ನು ದೇಶಿ ಮಾರುಕಟ್ಟೆಯಲ್ಲಿ 2,012 ರೂಪಾಯಿ ಏರಿಕೆ ಕಂಡ ಬೆಳ್ಳಿ ಬೆಲೆ ಕೆ.ಜಿಗೆ 69,454 ರೂಪಾಯಿಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ 27.30 ಡಾಲರ್ ಪ್ರತಿ ಔನ್ಸ್ ಆಗಿದೆ.