ಮದುವೆ ಸಂದರ್ಭದಲ್ಲಿ ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ ಸಿಗ್ತಿದೆ. ಈ ವರ್ಷ ಜನವರಿ 1 ರಿಂದ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 4,963 ರೂಪಾಯಿಯಷ್ಟು ಇಳಿಕೆ ಕಂಡಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು 10 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 45,500 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ಇದು ಶೇಕಡಾ 0.11ರಷ್ಟು ಕಡಿಮೆಯಾಗಿದೆ.
ಕಳೆದ ಏಳು ದಿನಗಳಲ್ಲಿ ಆರನೇ ಬಾರಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಬೆಳ್ಳಿ ಪ್ರತಿ ಕೆಜಿಗೆ 69,216 ರೂಪಾಯಿಯಷ್ಟಿದೆ. ಕಳೆದ 10 ತಿಂಗಳಲ್ಲಿ ಚಿನ್ನವು ಸುಮಾರು 11 ಸಾವಿರ ರೂಪಾಯಿಗಳಷ್ಟು ಅಗ್ಗವಾಗಿದೆ. ಆಗಸ್ಟ್ 2020 ರಲ್ಲಿ ಚಿನ್ನವು ದಾಖಲೆಯ ಮಟ್ಟಕ್ಕೇರಿತ್ತು. 10 ಗ್ರಾಂ ಚಿನ್ನದ ಬೆಲೆ 56,200 ರೂಪಾಯಿಯಾಗಿತ್ತು.
ದೆಹಲಿ ಸರಫಾ ಬಜಾರ್‌ನಲ್ಲಿ ಬುಧವಾರ 10 ಗ್ರಾಂಗೆ ಚಿನ್ನದ ಬೆಲೆ 45,500 ರೂಪಾಯಿಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಶೇಕಡಾ 0.2ರಷ್ಟು ಕುಸಿದು 1,734.16 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆಯಲ್ಲಿ ಬುಧವಾರ ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ 69,216 ರೂಪಾಯಿಯಿದೆ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ವಿವಾಹದ ಋತು ಮತ್ತು ಬೆಲೆಗಳು ಗಣನೀಯವಾಗಿ ಇಳಿದ ಕಾರಣ ಬೇಡಿಕೆ ಹೆಚ್ಚಾಗ್ತಿದೆ. ಹೆಚ್ಚಿನ ಬೇಡಿಕೆ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಬೆಲೆ ಕುಸಿತ ತಾತ್ಕಾಲಿಕವಾಗಿದ್ದು, ಚಿನ್ನ ಖರೀದಿಗೆ ಇದು ಒಳ್ಳೆ ಅವಕಾಶವಾಗಿದೆ.