ನವದೆಹಲಿ: ಬೇಡಿಕೆ ಹೆಚ್ಚಳ ಮತ್ತು ಜಾಗತಿಕ ಪ್ರಬಲ ಸೂಚನೆಗಳ ನಡುವೆ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ 10 ಗ್ರಾಂ ಚಿನ್ನದ ದರ 540 ರೂ. ಏರಿಕೆಯಾಗಿದ್ದು 61,750 ರೂ.ಗೆ ಮಾರಾಟವಾಗಿದೆ. ಹಿಂದಿನ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರ 61,210 ರೂಪಾಯಿಗೆ ಕೊನೆಯಾಗಿತ್ತು.
ಬೆಳ್ಳಿಯ ದರ ಕೆಜಿಗೆ 1200 ರೂ. ಹೆಚ್ಚಳವಾಗಿದ್ದು 76,500 ರೂಪಾಯಿಗೆ ತಲುಪಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಕಾರಣ ದರ ಹೆಚ್ಚಳವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್ ಗೆ 1984 ಡಾಲರ್, ಬೆಳ್ಳಿ ದರ ಪ್ರತಿ ಔನ್ಸ್ ಗೆ 23.86 ಡಾಲರ್ ಇದೆ.