ನವದೆಹಲಿ: ಚಿನ್ನದ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ದೆಹಲಿ ಶನಿವಾರ ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ 10 ಗ್ರಾಂ ಗೆ 940 ರೂಪಾಯಿ ಏರಿಕೆಯಾಗಿದ್ದು, 62,020 ರೂಪಾಯಿಗೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ ಎಂದು ಹೆಚ್.ಡಿ.ಎಫ್.ಸಿ. ಸೆಕ್ಯೂರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 61,080 ರೂ. ತಲುಪಿತ್ತು. ಬೆಂಗಳೂರಿನಲ್ಲಿ ಶುದ್ಧ ಚಿನ್ನದ ದರ 61,740 ರೂ. ಇದ್ದು, ಆಭರಣ ಚಿನ್ನದ ದರ 57,000 ರೂ. ಇದೆ.
ಬೆಳ್ಳಿ ದರ ದೆಹಲಿಯಲ್ಲಿ ಕೆಜಿಗೆ 660 ರೂ. ಹೆಚ್ಚಳವಾಗಿದ್ದು, 76,700 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ದರ 78,300 ರೂ. ಇದೆ. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.