ನವದೆಹಲಿ: ಇತ್ತೀಚೆಗೆ ಇಳಿಕೆ ಹಾದಿಯಲ್ಲಿದ್ದ ಚಿನ್ನ ದರದಲ್ಲಿ ಏರಿಕೆ ಕಂಡಿದೆ. ಧಿಢೀರ್ 881 ರೂಪಾಯಿ ಹೆಚ್ಚಳವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ದರ ಜಾಸ್ತಿಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ದರ 881 ರೂಪಾಯಿ ಹೆಚ್ಚಳವಾಗಿ 44,701 ರೂಪಾಯಿಗೆ ಮಾರಾಟವಾಗಿದೆ. ಅದೇ ರೀತಿ ಬೆಳ್ಳಿ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿಗೆ 1071 ರೂಪಾಯಿ ಹೆಚ್ಚಳವಾಗಿದ್ದು, 63,256 ರೂ.ಗೆ ಮಾರಾಟವಾಗಿದೆ.