ನವದೆಹಲಿ: ಚಿನ್ನ, ಬೆಳ್ಳಿ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಮಂಗಳವಾರ ದರ ಏರಿಕೆ ಶಾಕ್ ನೀಡಿದೆ. ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳವಾಗಿದೆ.
ಚಿನ್ನದ ದರ 10 ಗ್ರಾಂಗೆ 816 ರೂಪಾಯಿ ಏರಿಕೆಯಾಗಿದ್ದು, 49,430 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 3063 ರೂಪಾಯಿ ಹೆಚ್ಚಳವಾಗಿ 64,361 ರೂಪಾಯಿಗೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿ ಪ್ರತಿ ಔನ್ಸ್ ಚಿನ್ನದ ದರ 1864 ಡಾಲರ್ ತಲುಪಿದೆ.