ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಅಂತೆಯೇ ದೇಶಿಯ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಳವಾಗಿದೆ.
ರೂಪಾಯಿ ಮೌಲ್ಯ ಕುಸಿತಕ್ಕೆ ಅನುಗುಣವಾಗಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 761 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ ಚಿನ್ನದ ದರ 48,414 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ 1308 ರೂಪಾಯಿ ಜಾಸ್ತಿಯಾಗಿದ್ದು ಒಂದು ಕೆಜಿ ಬೆಳ್ಳಿ ಬೆಲೆ 49,204 ರೂ.ಗೆ ತಲುಪಿದೆ.
ಮುಂಬೈ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 47,540 ರೂ., ಆಭರಣ ಚಿನ್ನದ ದರ 10 ಗ್ರಾಂಗೆ 47,350 ರೂ. ಆಗಿದೆ. ಬೇಡಿಕೆ ಜಾಸ್ತಿಯಾಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದ ಚಿನ್ನದ ಬೆಲೆ ಹೆಚ್ಚಳವಾಗಿದೆ ಎನ್ನಲಾಗಿದೆ.