ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದೆ. 10 ಗ್ರಾಂಗೆ 310 ರೂಪಾಯಿ ಏರಿಕೆಯಾಗಿದ್ದು, 46,580 ರೂಪಾಯಿ ತಲುಪಿದೆ.
ಅದೇ ರೀತಿ ಬೆಳ್ಳಿಯ ದರ ಒಂದು ಕೆಜಿಗೆ 580 ರೂಪಾಯಿ ಏರಿಕೆಯಾಗಿದ್ದು, 67,429 ರೂ. ತಲುಪಿದೆ. ದೇಶದಲ್ಲಿ ಕೊರೋನಾ ಎರಡನೇ ಅಲೆಯ ಕಾರಣ ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳಲಾಗ್ತಿದೆ. ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ತೋರಿದ ಕಾರಣ ಬೇಡಿಕೆ ಜಾಸ್ತಿಯಾಗಿ ದರ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.