
ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ ಇಲ್ಲಿದೆ. ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ ಪ್ರತಿ 10 ಗ್ರಾಂ ಗೆ 900 ರೂ.ಇಳಿಕೆಯಾಗಿದ್ದು, 61,300 ರೂ.ಗೆ ಮಾರಾಟವಾಗಿದೆ.
ಅದೇ ರೀತಿ ಬೆಳ್ಳಿ ದರ ಕಡಿಮೆಯಾಗಿದೆ. ಬೆಳ್ಳಿ ದರ ಕೆಜಿಗೆ 200 ರೂಪಾಯಿ ಇಳಿಕೆಯಾಗಿ 76 ಸಾವಿರ ರೂ.ಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕಡಿಮೆಯಾಗಿದೆ.