ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಗಗನಕ್ಕೇರಿ ಚಿನ್ನಾಭರಣ ಖರೀದಿದಾರರು ಹಿಂದೇಟು ಹಾಕುವಂತಾಗಿತ್ತು.
ಏರುಗತಿಯಲ್ಲೇ ಸಾಗುತ್ತಿದ್ದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದ್ದು, ಬುಧವಾರ ಮತ್ತಷ್ಟು ಕಡಿಮೆಯಾಗಿದೆ. ಷೇರು ಮಾರುಕಟ್ಟೆ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ ಕಡಿಮೆಯಾಗತೊಡಗಿದೆ.
ಬುಧವಾರ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 1228 ರೂ. ಇಳಿಕೆಯಾಗಿದೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 54,174 ರೂ. ಇದ್ದು, ಬುಧವಾರ 52,946 ರೂ.ಗೆ ಇಳಿದಿದೆ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ 5174 ರೂ. ಇಳಿಕೆಯಾಗಿದೆ. ಮಂಗಳವಾರ ಬೆಳ್ಳಿ ಬೆಲೆ ಕೆಜಿಗೆ 72,756 ರೂಪಾಯಿ ಇದ್ದು, ಬುಧವಾರ 67,584 ರೂ.ಗೆ ಇಳಿದಿದೆ.