3 ತಿಂಗಳ ಅವಧಿಯೊಳಗೆ ಚಿನ್ನದ ಬೆಲೆ 6,000 ರೂ. ಏರಿಕೆಯಾಗಿದ್ದು, ಇಂದು ಮತ್ತೊಂದು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಜಾಗತಿಕ ಮಾರುಕಟ್ಟೆಯ ಪರಿಣಾಮ ಭಾರತೀಯ ಮಾರುಕಟ್ಟೆಗಳಲ್ಲಿ ಇಂದು ಚಿನ್ನದ ಬೆಲೆಗಳು ಮತ್ತೊಂದು ದಾಖಲೆಯ ಎತ್ತರವನ್ನು ತಲುಪಿವೆ. ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯವು ದಿನದ ಗರಿಷ್ಠ ಮಟ್ಟದಲ್ಲಿ 10 ಗ್ರಾಂಗೆ 56,850 ರೂ.ಗೆ ಕ್ಕೆ 0.3% ರಷ್ಟು ಏರಿತು. ಬೆಳ್ಳಿಯು ಕೆಜಿಗೆ 68,743 ರೂ.ಗೆ ಏರಿದೆ. ನವೆಂಬರ್ ಆರಂಭದಿಂದಲೂ, ಮೂರು ತಿಂಗಳೊಳಗೆ ಚಿನ್ನದ ದರ ಸುಮಾರು 6,000 ರೂ. ಏರಿಕೆ ಆಗಿದೆ.