ವಾರದ ಕೊನೆ ವಹಿವಾಟಿನ ದಿನ ಶುಕ್ರವಾರದಂದು ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಗುರುವಾರ ಸಂಜೆ 10 ಗ್ರಾಂಗೆ 48,544 ರೂಪಾಯಿಗೆ ಬಂದ್ ಆಗಿದ್ದ ವಹಿವಾಟು ಇಂದು 208 ರೂಪಾಯಿಗಳಷ್ಟು ಕುಸಿತದೊಂದಿಗೆ 48,336 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಜುಲೈ ವಿತರಣೆಯ ಬೆಳ್ಳಿ 436 ರೂಪಾಯಿಗಳ ಇಳಿಕೆ ಕಂಡು ಪ್ರತಿ ಕೆ.ಜಿ.ಗೆ 71,868 ರೂಪಾಯಿಯಾಗಿದೆ.
ಕಳೆದ ವರ್ಷದ ಈ ಅವಧಿಗೆ ಹೋಲಿಕೆ ಮಾಡಿದ್ರೆ ಈ ವರ್ಷ ಜನವರಿ-ಮಾರ್ಚ್ 2021ರಲ್ಲಿ ಚಿನ್ನದ ಬೇಡಿಕೆ ಶೇಕಡಾ 37ರಷ್ಟು ಹೆಚ್ಚಾಗಿದೆ. ಡಬ್ಲ್ಯುಜಿಸಿ ಅಂಕಿಅಂಶಗಳ ಪ್ರಕಾರ, 2020 ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಒಟ್ಟು ಬೇಡಿಕೆ 102 ಟನ್ ಆಗಿತ್ತು.
ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೆಲೆ 51,700 ರೂಪಾಯಿಗೆ ಏರಿಕೆಯಾಗಬಹುದೆಂದು ತಜ್ಞರು ಹೇಳಿದ್ದಾರೆ. ಹೂಡಿಕೆದಾರರು ತಮ್ಮ ಬಂಡವಾಳದಲ್ಲಿ ಚಿನ್ನದ ಪಾಲನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.