![](https://kannadadunia.com/wp-content/uploads/2021/01/gold-1514371397.jpg)
ವಾರದ ಮೊದಲ ದಿನ ಸೋಮವಾರ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಬೆಳಿಗ್ಗೆ 181 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 48786 ರೂಪಾಯಿಯಾಗಿತ್ತು. ಬೆಳಿಗ್ಗೆ 10 ಗಂಟೆಗೆ ಬಂಗಾರದ ಬೆಲೆ 222 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 48745 ರೂಪಾಯಿಯಾಗಿದೆ.
ಏಪ್ರಿಲ್ ವಿತರಣೆಯ ಚಿನ್ನ 252 ರೂಪಾಯಿ ಇಳಿಕೆ ಕಂಡು 48760 ರೂಪಾಯಿಯಾಗಿದೆ. ಇದಕ್ಕೂ ಮುನ್ನ ಶುಕ್ರವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೂಲ್ಯವಾದ ಲೋಹಗಳ ಕುಸಿತ ಇದಕ್ಕೆ ಕಾರಣ ಎನ್ನಲಾಗ್ತಿದೆ. ಯುಎಸ್ ಬಾಂಡ್ ಮೌಲ್ಯ ಹೆಚ್ಚಾಗಿರುವುದು ಮತ್ತು ಯುಎಸ್ ಡಾಲರ್ ಬಲಗೊಂಡ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ಶುಕ್ರವಾರ ಎಂಸಿಎಎಕ್ಸ್ ನಲ್ಲಿ ಚಿನ್ನದ ಬೆಲೆ ಶೇಕಡಾ 4.10 ರಷ್ಟು ಇಳಿಕೆ ಕಂಡು 10 ಗ್ರಾಂಗೆ 48818 ರೂಪಾಯಿಯಾಗಿತ್ತು. ಬೆಳ್ಳಿ ಸಹ ಶೇಕಡಾ 8.74 ರಷ್ಟು ಇಳಿಕೆ ಕಂಡು ಪ್ರತಿ ಕೆ.ಜಿ.ಗೆ 63850 ರೂಪಾಯಿಯಾಗಿತ್ತು.