ನವದೆಹಲಿ: ಇವತ್ತು ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಹೆಚ್ಚಳವಾಗಿದೆ. ಹೆಚ್.ಡಿ.ಎಫ್.ಸಿ. ಸೆಕ್ಯೂರಿಟೀಸ್ ಪ್ರಕಾರ, ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ 10 ಗ್ರಾಂಗೆ 496 ರೂಪಾಯಿ ಹೆಚ್ಚಳವಾಗಿದೆ.
ಚಿನ್ನದ ದರ 10 ಗ್ರಾಂಗೆ 50,297 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ 10 ಗ್ರಾಂಗೆ 49,801 ರೂಪಾಯಿ ದರ ಇತ್ತು. ಅದೇ ರೀತಿ ಬೆಳ್ಳಿ ಬೆಲೆ ಕೆಜಿಗೆ 2249 ರೂಪಾಯಿ ಹೆಚ್ಚಳವಾಗಿದೆ. ಕೆಜಿಗೆ 67,228 ರೂಪಾಯಿ ಇದ್ದ ಬೆಳ್ಳಿ ದರ 69,477 ರೂ.ಗೆ ತಲುಪಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿಕೆಯಾಗಿ 73.73 ಕ್ಕೆ ತಲುಪಿದೆ.