
ಬಂಗಾರ ಪ್ರಿಯರಿಗೆ ಬೇಸರದ ಸುದ್ದಿಯೊಂದಿದೆ. ಚಿನ್ನದ ಬೆಲೆ ಸತತ ಎರಡನೇ ದಿನವೂ ಏರಿಕೆ ಕಂಡಿದೆ. ಎರಡು ದಿನಗಳಿಂದ ಚಿನ್ನದ ಬೆಲೆ ಒಟ್ಟೂ 350 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಬುಧವಾರ ಹಾಗೂ ಇಂದು ಏರಿಕೆ ಕಂಡು ಬಂದಿದೆ.
ಬುಧವಾರ 110 ರೂಪಾಯಿ ಏರಿಕೆಯೊಂದಿಗೆ ಚಿನ್ನದ ಬೆಲೆ 10 ಗ್ರಾಂಗೆ 47,000 ರೂಪಾಯಿಯಾಗಿತ್ತು. ಗುರವಾರ ಚಿನ್ನದ ಬೆಲೆ 250 ರೂಪಾಯಿಗಳ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ. ಈ ವಾರ ಚಿನ್ನವು ಗರಿಷ್ಠ ಮಟ್ಟಕ್ಕಿಂತ ಕೆಳಗಿದೆ. ಸೋಮವಾರ 10 ಗ್ರಾಂ ಚಿನ್ನದ ಬೆಲೆ 47319 ರೂಪಾಯಿಯಾಗಿತ್ತು. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 46871 ರೂಪಾಯಿಗೆ ಇಳಿಕೆ ಕಂಡಿತ್ತು. ಬುಧವಾರ 10 ಗ್ರಾಂ ಚಿನ್ನದ ಬೆಲೆ 47000 ರೂಪಾಯಿಯಾಗಿತ್ತು. ಗುರುವಾರ 10 ಗ್ರಾಂ ಚಿನ್ನದ ಬೆಲೆ 47220 ರೂಪಾಯಿಯಾಗಿದೆ.
ಕಳೆದ ವರ್ಷ ಕೊರೊನಾ ಬಿಕ್ಕಟ್ಟಿನಿಂದಾಗಿ ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದರು. ಆಗಸ್ಟ್ 2020 ರಲ್ಲಿ ಎಂಸಿಎಕ್ಸ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ 56191 ರೂಪಾಯಿಗಳ ಗರಿಷ್ಠ ಮಟ್ಟವನ್ನು ತಲುಪಿತ್ತು.
ಇನ್ನು ಬೆಳ್ಳಿ ಬೆಲೆ ಕೆ.ಜಿಗೆ 70280 ರೂಪಾಯಿಯಾಗಿದೆ. ಬುಧವಾರ ಕೆ.ಜಿ. ಬೆಳ್ಳಿ ಬೆಲೆ 69619 ರೂಪಾಯಿಯಾಗಿತ್ತು.