ಚಿನ್ನ, ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಮಂಗಳವಾರ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.34 ರಷ್ಟು ಕುಸಿದು 45,155 ರೂಪಾಯಿಯಾಗಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 66,600 ರೂಪಾಯಿಗೆ ಬಂದು ನಿಂತಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ 679 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಕೂಡ 1,847 ರೂಪಾಯಿ ಇಳಿಕೆ ಕಂಡು ಕೆ.ಜಿಗೆ 68,920 ರೂಪಾಯಿಯಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಮಂಗಳವಾರ ಇಳಿಕೆ ಕಂಡು ಬಂದಿದೆ. ನ್ಯೂಯಾರ್ಕ್ ನಲ್ಲಿ ಚಿನ್ನ ಶೇಕಡಾ 0.49ರಷ್ಟು ಇಳಿದಿದೆ. ಚಿನ್ನದ ಬೆಲೆ 1,719 ಡಾಲರ್ ಪ್ರತಿ ಔನ್ಸ್ ಆಗಿದೆ. ಕಳೆದ 6 ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 10,000 ಅಥವಾ ಶೇ.18 ರಷ್ಟು ಕಡಿಮೆಯಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ 26.08 ಡಾಲರ್ ಪ್ರತಿ ಔನ್ಸ್ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಬೆಲೆ ಇಳಿಕೆ ದೇಶಿ ಮಾರುಕಟ್ಟೆಯಲ್ಲೂ ಕಾಣಿಸಿಕೊಂಡಿದೆ. ತೆರಿಗೆಗಳು ಮತ್ತು ಸುಂಕಗಳ ಆಧಾರದ ಮೇಲೆ ಚಿನ್ನದ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.