ಬಂಗಾರ ಪ್ರಿಯರಿಗೆ ಸಂತೋಷದ ಸುದ್ದಿಯಿದೆ. ಮದುವೆ ಋತುವಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಕಳೆದ ವಾರ ಎಂಸಿಎಕ್ಸ್ ನ ಏಪ್ರಿಲ್ ಫ್ಯೂಚರ್‌ಗಳು 47,000 ರೂಪಾಯಿಯಾಗಿತ್ತು. ಇಂದು ಅದು 45,000 ರೂಪಾಯಿಗೆ ಇಳಿದಿದೆ.
ಎಂಸಿಎಕ್ಸ್ ನಲ್ಲಿ ಏಪ್ರಿಲ್ ಭವಿಷ್ಯದ ಚಿನ್ನವು 10 ಗ್ರಾಂಗೆ 200 ರೂಪಾಯಿ ಇಳಿಕೆಯೊಂದಿಗೆ ವಹಿವಾಟು ಶುರು ಮಾಡಿದೆ. ಸದ್ಯ 10 ಗ್ರಾಂ ಚಿನ್ನದ ಬೆಲೆ 45100 ರೂಪಾಯಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನವು ಸುಮಾರು 600 ರೂಪಾಯಿಗಳಷ್ಟು ಅಗ್ಗವಾಗಿದೆ.
ಕಳೆದ ಸೋಮವಾರ ಎಂಸಿಎಕ್ಸ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ 46901 ರೂಪಾಯಿಯಾಗಿತ್ತು. ಆದರೆ ಶುಕ್ರವಾರ ಇದು 10 ಗ್ರಾಂಗೆ 45736 ರೂಪಾಯಿಯಾಗಿತ್ತು. ವಾರದ ಕೊನೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1165 ರೂಪಾಯಿ ಅಗ್ಗವಾಗಿತ್ತು. ಕಳೆದ ವರ್ಷ ಕೊರೊನಾ ಬಿಕ್ಕಟ್ಟಿನಿಂದಾಗಿ ಚಿನ್ನದ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಆಗಸ್ಟ್ 2020 ರಲ್ಲಿ, ಎಂಸಿಎಕ್ಸ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ 56191 ರೂಪಾಯಿ ಗರಿಷ್ಠ ಮಟ್ಟವನ್ನು ತಲುಪಿತ್ತು.