ಕಳೆದ ವಾರ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಈ ವಾರದ ಮೊದಲ ದಿನವೂ ಏರಿಕೆ ಮುಖ ಕಂಡಿದೆ. ಕಳೆದ ವಾರ ಬಂಗಾರ 400 ರೂಪಾಯಿ ಏರಿಕೆ ಕಂಡಿತ್ತು. ಆದ್ರೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಆದ್ರೆ ವಾರದ ಮೊದಲ ದಿನ ಎಂಸಿಎಕ್ಸ್ ನಲ್ಲಿ ಬೆಳ್ಳಿ ಬೆಲೆ ಏರಿಕೆ ಕಂಡಿದೆ.
ಎಂಸಿಎಕ್ಸ್ ನಲ್ಲಿ ಶುಕ್ರವಾರ ಚಿನ್ನದ ಬೆಲೆ 170 ರೂಪಾಯಿಗಳ ಏರಿಕೆಯೊಂದಿಗೆ 10 ಗ್ರಾಂಗೆ 47750 ರೂಪಾಯಿಯಾಗಿತ್ತು. ಚಿನ್ನದ ಏರಿಕೆ ಸೋಮವಾರವೂ ಮುಂದುವರೆದಿದೆ. ಸೋಮವಾರ ಚಿನ್ನದ ಬೆಲೆ 180 ರೂಪಾಯಿ ಏರಿಕೆಯೊಂದಿಗೆ 10 ಗ್ರಾಂಗೆ 47915 ರೂಪಾಯಿಯಾಗಿದೆ.
ಇನ್ನು ಬೆಳ್ಳಿ ಬೆಲೆ 180 ರೂಪಾಯಿ ಇಳಿದು ಕೆ.ಜಿ.ಗೆ 71500 ರೂಪಾಯಿಯಾಗಿತ್ತು. ಸೋಮವಾರ 780 ರೂಪಾಯಿ ಏರಿಕೆ ಕಂಡ ಬೆಳ್ಳಿ ಬೆಲೆ ಕೆ.ಜಿ.ಗೆ 72200 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ಏರಿಕೆ ಕಂಡಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 47854 ರೂಪಾಯಿಯಾಗಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 71967 ರೂಪಾಯಿಯಾಗಿದೆ.