
ನವದೆಹಲಿ: ಚಿನ್ನಾಭರಣ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನ 650 ರೂ., ಬೆಳ್ಳಿ 1,800 ರೂ. ಇಳಿಕೆಯಾಗಿದೆ.
ಜಾಗತಿಕ ದುರ್ಬಲ ಸೂಚನೆಗಳ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 650 ರೂ. ಕಡಿಮೆಯಾಗಿದ್ದು, 57,550 ರೂ.ಗೆ ಮಾರಾಟವಾಗಿದೆ. ಬೆಳ್ಳಿ ದರ ಪ್ರತಿ ಕೆಜಿಗೆ 1800 ರೂ. ಕಡಿಮೆಯಾಗಿದ್ದು, 71,500 ರೂ.ಗೆ ಮಾರಾಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಮತ್ತು ದೇಶಿಯ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ.