ವಾರದ ಮೊದಲ ದಿನ ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಾದ ಬದಲಾವಣೆ ದೇಶಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಚಿನ್ನದ ಬೆಲೆ ಶೇಕಡಾ 0.24 ರಷ್ಟು ಏರಿಕೆ ಕಂಡಿದ್ದು, 10 ಗ್ರಾಂಗೆ 48519 ರೂಪಾಯಿಯಾಗಿದೆ.
ಬೆಳ್ಳಿ ಬೆಲೆ ಶೇಕಡಾ 0.5 ರಷ್ಟು ಏರಿಕೆಯಾಗಿದ್ದು, ಕೆ.ಜಿ. ಗೆ 71,440 ರೂಪಾಯಿಯಾಗಿದೆ. ಶುಕ್ರವಾರ ಚಿನ್ನದ ಬೆಲೆ ಶೇಕಡಾ 0.22 ರಷ್ಟು ಇಳಿಕೆ ಕಂಡಿತ್ತು. ಬೆಳ್ಳಿ ಬೆಲೆ ಶೇಕಡಾ 1.7 ರಷ್ಟು ಇಳಿಕೆ ಕಂಡಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರಿಪ್ಟೋಕರೆನ್ಸಿ ಕುಸಿತದ ನಂತರ ಚಿನ್ನವು 4 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಬೆಳ್ಳಿ ಶೇಕಡಾ 0.4 ರಷ್ಟು ಏರಿಕೆಯೊಂದಿಗೆ 27.64 ಡಾಲರ್ ಪ್ರತಿ ಔನ್ಸ್ ಆಗಿದೆ.
ಸಾರ್ವಭೌಮ ಗೋಲ್ಡ್ ಯೋಜನೆಯಲ್ಲಿ ಚಿನ್ನ ಖರೀದಿಗೆ ಅವಕಾಶವಿದೆ. ಇಂದಿನಿಂದ ಮೇ 28ರವರೆಗೆ ಚಿನ್ನ ಖರೀದಿಸಬಹುದಾಗಿದೆ. ಇದ್ರಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 4,842 ರೂಪಾಯಿ ನಿಗದಿ ಮಾಡಲಾಗಿದೆ.