
ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ದರ 590 ರೂ. ಹೆಚ್ಚಳವಾಗಿದ್ದು 61,040 ರೂ.ಗೆ ಮಾರಾಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ಧಾರಣೆ ಹೆಚ್ಚಳವಾಗಿದೆ. ಇನ್ನು ಬೆಳ್ಳಿ ದರ ಕೆಜಿಗೆ 420 ರೂ. ಏರಿಕೆ ಕಂಡಿದ್ದು, 75,070 ರೂ.ಗೆ ಮಾರಾಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ದರ 1997 ಡಾಲರ್, ಬೆಳ್ಳಿ ದರ ಒಂದು ಔನ್ಸ್ ಗೆ 24.95ಡಾಲರ್ ನಂತೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿರುವುದೇ ಬೆಲೆ ಏರಿಕೆಯಾಗಲು ಕಾರಣವೆಂದು HDFC ಸೆಕ್ಯುರೀಟಿಸ್ ತಿಳಿಸಿದೆ.