ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದೆ. ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ.
10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ 1370 ರೂಪಾಯಿ ಹೆಚ್ಚಳವಾಗಿ 51,550 ರೂಪಾಯಿಗೆ ತಲುಪಿದೆ. ಆಭರಣ ಚಿನ್ನದ ದರ 1250 ರೂಪಾಯಿ ಏರಿಕೆ ಕಂಡು 47,250 ತಲುಪಿದೆ. ಬೆಳ್ಳಿ ದರ ಕೆಜಿಗೆ 2700 ರೂಪಾಯಿ ಜಾಸ್ತಿಯಾಗಿ 72,700 ರೂ.ಗೆ ತಲುಪಿದೆ.