ನವದೆಹಲಿ: ಏರು ಗತಿಯಲ್ಲಿ ಸಾಗುತ್ತಿರುವ ಚಿನ್ನದ ದರ ನವೆಂಬರ್ ವೇಳೆಗೆ 61,000 ರೂ. ತಲುಪುವ ಸಾಧ್ಯತೆ ಇದೆ.
ಮದುವೆ, ಹಬ್ಬದ ಸೀಸನ್ ಗಳಲ್ಲಿ ಚಿನ್ನಾಭರಣ ಖರೀದಿ ಹೆಚ್ಚಾಗಿರುತ್ತದೆ. ಹೀಗಾಗಿ ಹಬ್ಬದ ಹೊತ್ತಲ್ಲಿ ದರ ಏರಿಕೆ ಕಾಣುತ್ತದೆ. ಮಾರುಕಟ್ಟೆ ಆಧರಿತ ಬೆಳವಣಿಗೆಗಳ ಕಾರಣಗಳಿಂದಲೂ ಚಿನ್ನದ ದರ ದುಬಾರಿಯಾಗಲಿದೆ. ನವೆಂಬರ್ ಮಧ್ಯದ ವೇಳೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ 10 ಗ್ರಾಂ ಚಿನ್ನದ ದರ 61,000 ರೂ. ತಲುಪುವ ಸಂಭವವಿದೆ. ಪ್ರಸ್ತುತ ಇರುವ ದರಕ್ಕಿಂತ 2 ಸಾವಿರ ರೂಪಾಯಿ ಹೆಚ್ಚಳವಾಗಲಿದೆ. ಶೇಕಡ 3ರಷ್ಟು ದರ ಹೆಚ್ಚಳ ಆಗಲಿದೆ. ಚಿನ್ನದ ದರ ಮಾತ್ರವಲ್ಲದೇ, ಬೆಳ್ಳಿ ದರ ಪ್ರತಿ ಕೆಜಿಗೆ 5000 ರೂ.ವರೆಗೆ ಏರಿಕೆಯಾಗಲಿದ್ದು, 75,000 ರೂ. ತಲುಪಬಹುದು ಎಂದು ಹೇಳಲಾಗಿದೆ.
ಕಳೆದ ವರ್ಷ ದೀಪಾವಳಿಯಿಂದ ಇತ್ತೀಚಿನವರೆಗೆ ಚಿನ್ನದ ದರದಲ್ಲಿ ಶೇಕಡ 17ರಷ್ಟು, ಬೆಳ್ಳಿ ದರದಲ್ಲಿ ಶೇಕಡ 23ರಷ್ಟು ಏರಿಕೆಯಾಗಿದೆ. ಹಬ್ಬ, ಮದುವೆ ಸೀಸನ್ ಗಳ ಕಾರಣದಿಂದ ಚಿನ್ನಾಭರಣ ಖರೀದಿ ಹೆಚ್ಚಾಗಿದೆ. ಹೀಗಾಗಿ ದರ ದುಬಾರಿಯಾಗಿದೆ. ಹೂಡಿಕೆ ಉದ್ದೇಶದಿಂದಲೂ ಚಿನ್ನದ ಖರೀದಿ ಹೆಚ್ಚಳವಾಗಿದೆ. ಒಂದೇ ವಾರದಲ್ಲಿ ಚಿನ್ನದ ದರ 1656 ರೂ. ಹೆಚ್ಚಾಗಿದೆ. ಬೆಳ್ಳಿ ದರ ಕೆಜಿಗೆ 1419 ಹೆಚ್ಚಾಗಿದೆ.