
ಬೆಂಗಳೂರು: ಚಿನ್ನದ ದರ ಇಳಿಮುಖವಾಗಿದೆ. ಸೋಮವಾರ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 370 ರೂಪಾಯಿ ಕಡಿಮೆಯಾಗಿದ್ದು, 47,420 ರೂಪಾಯಿ ತಲುಪಿದೆ.
ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ 370 ರೂಪಾಯಿ ಕಡಿಮೆಯಾಗಿ 51,730 ರೂ. ತಲುಪಿದೆ. ಕೊರೋನಾ ಮೊದಲಾದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಏರಿಕೆ, ಇಳಿಕೆ ಕಾಣುತ್ತಿದೆ. ಕಳೆದ ವಾರ 10 ಗ್ರಾಂಗೆ 640 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಸೋಮವಾರ 370 ರೂ. ಕಡಿಮೆಯಾಗಿ ಇಳಿಕೆ ಹಾದಿಯಲ್ಲಿದೆ ಎನ್ನಲಾಗಿದೆ.