ಮುಂಬೈ: ಚಿನ್ನದ ದರ ಒಂದು ತಿಂಗಳಲ್ಲಿ 3000 ರೂಪಾಯಿ ಏರಿಕೆಯಾಗಿದೆ. ಚಿನ್ನದ ದರ ಏರಿಕೆಯಾಗಿದ್ದರೂ ಖರೀದಿಗೆ ಇದು ಸಕಾಲ ಎಂದು ಹೇಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಿಸುವ ಸಾಧ್ಯತೆ ಇರುವುದರಿಂದ ಡಾಲರ್ ದುರ್ಬಲವಾಗಲಿದೆ. ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದಾಗಿ ಚಿನ್ನದ ದರ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ಚಿನ್ನದ ದರ 10 ಗ್ರಾಂಗೆ 3000 ರೂ. ಹೆಚ್ಚಳವಾಗಿದೆ. ತಿಂಗಳ ಆರಂಭದಲ್ಲಿ 44,000 ರೂಪಾಯಿ ಇದ್ದ ಚಿನ್ನ ದರ 47,350 ರೂ.ಗೆ ತಲುಪಿದೆ. ಬೆಂಗಳೂರಲ್ಲಿ 22 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ 44,150 ರೂ., 24 ಕ್ಯಾರಟ್ ಚಿನ್ನದ ದರ 48,150 ರೂ.ಗೆ ತಲುಪಿದೆ.