ನವದೆಹಲಿ: ಹೊಸ ವರ್ಷದಲ್ಲಿ ಚಿನ್ನದ ದರ ಏರಿಕೆ ಕಾಣಲಿದೆ. 2024ರಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 72,000 ರೂ.ವರೆಗೆ ತಲುಪಬಹುದು ಎಂದು ಹೇಳಲಾಗಿದೆ.
ಹಲವು ದೇಶಗಳ ಕೇಂದ್ರೀಯ ಬ್ಯಾಂಕುಗಳು ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ರೂಪಿಸುವ ಹಣಕಾಸು ನೀತಿಗಳು ದರ ಏರಿಕೆಗೆ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಕೇಂದ್ರೀಯ ಬ್ಯಾಂಕುಗಳು 2022 ರಿಂದ ಈಚೆಗೆ ಬಡ್ಡಿ ದರ ಹೆಚ್ಚಳ ನೀತಿ ಅನುಸರಿಸಿವೆ. ಜಾಗತಿಕ ಆರ್ಥಿಕ ಬೆಳವಣಿಗೆ ಇಳಿಮುಖವಾಗುವ ಸಂಭವ ಇದೆ. ಜಾಗತಿಕ ರಾಜಕೀಯ ಸನ್ನಿವೇಶ, ಡಾಲರ್ ಸೂಚ್ಯಂಕದ ಪ್ರವೃತ್ತಿ, ಪ್ರಮುಖ ದೇಶಗಳಲ್ಲಿ ಚುನಾವಣೆಗಳು, ಕೇಂದ್ರೀಯ ಬ್ಯಾಂಕುಗಳ ಚಿನ್ನ ಖರೀದಿಸುವ ಪ್ರವೃತ್ತಿ ಮೊದಲಾದ ಕಾರಣಗಳಿಂದ ಚಿನ್ನದ ದರ ಏರಿಕೆ ಕಾಣಬಹುದು ಎಂದು ಹೇಳಲಾಗಿದೆ.