ಮಂಗಳವಾರವೂ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯದ ಬೆಲೆ 10 ಗ್ರಾಂಗೆ ಶೇಕಡಾ 0.03 ರಷ್ಟು ಇಳಿದಿದೆ. ಇಂದು ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡುಬಂದಿದೆ. ಬೆಳ್ಳಿ ಪ್ರತಿ ಕೆ.ಜಿ.ಗೆ ಶೇಕಡಾ 0.22 ರಷ್ಟು ಕುಸಿತ ಕಂಡಿದೆ.
ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 14 ರೂಪಾಯಿ ಇಳಿಕೆ ಕಂಡು 49,328 ರೂಪಾಯಿಯಾಗಿದೆ. ಬೆಳ್ಳಿಯ ಬೆಲೆ 155 ರೂಪಾಯಿ ಇಳಿಕೆ ಕಂಡು ಕೆ.ಜಿ.ಗೆ 65,400 ರೂಪಾಯಿಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಇಂದು ಏರಿಕೆ ಕಂಡಿದೆ. ಚಿನ್ನ ಶೇಕಡಾ 0.2 ರಷ್ಟು ಏರಿಕೆ ಕಂಡು 1847.96 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಶೇಕಡಾ 0.8 ರಷ್ಟು ಏರಿಕೆ ಕಂಡು 25.11 ಡಾಲರ್ ಪ್ರತಿ ಔನ್ಸ್ ಆಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡೂ ಅಮೂಲ್ಯ ಲೋಹಗಳ ಬೆಲೆ ಏರಿಳಿತ ಕಂಡಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿಯಲು ಪ್ರಮುಖ ಕಾರಣವಾಗಿದೆ. ಯುಎಸ್ ಬಾಂಡ್ ಇಳುವರಿ ಹೆಚ್ಚಳ ಮತ್ತು ಡಾಲರ್ ಬಲ ಹೆಚ್ಚಾಗಿರುವುದು ಎರಡೂ ಅಮೂಲ್ಯ ಲೋಹಗಳ ಬೆಲೆ ಕಡಿಮೆಯಾಗಲು ಕಾರಣವಾಗಿದೆ.