ನವದೆಹಲಿ: ಚಿನ್ನದ ದರ ಮತ್ತಷ್ಟು ಇಳಿಮುಖವಾಗಿದೆ. ದಾಖಲೆಯ ಪ್ರಮಾಣದಲ್ಲಿ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇಳಿಕೆಯ ಹಾದಿಯಲ್ಲಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 710 ರೂಪಾಯಿ ಇಳಿಕೆಯಾಗಿದೆ.
ಮಾರುಕಟ್ಟೆಯ ತಜ್ಞರ ಪ್ರಕಾರ, ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬ್ಯಾಂಕ್ ಮಾಸಿಕ ಬಾಂಡ್ ಖರೀದಿಯನ್ನು ಮುಂದಿನ ವರ್ಷದಿಂದ ಸಡಿಲಗೊಳಿಸುವ ಸುಳಿವು ನೀಡಿರುವುದು ಚಿನ್ನದ ದರ ಇಳಿಕೆಗೆ ಕಾರಣವೆಂದು ಹೇಳಲಾಗಿದೆ.
ಕಳೆದ ಒಂದು ತಿಂಗಳಿಂದ ಚಿನ್ನದ ದರದಲ್ಲಿ 710 ರೂಪಾಯಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ 10 ಗ್ರಾಂ ಚಿನ್ನದ ದರ 280 ರೂ. ಕಡಿಮೆಯಾಗಿದ್ದು, 47 560 ರೂ.ಗೆ ಮಾರಾಟವಾಗಿದೆ.