
ನವದೆಹಲಿ: ಚಿನ್ನ ಪ್ರತಿ 10 ಗ್ರಾಂಗೆ 312 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 1037 ರೂಪಾಯಿ ಕಡಿಮೆಯಾಗಿದೆ.
ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 312 ಕಡಿಮೆಯಾಗಿ 46,907 ರೂಪಾಯಿಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 1037 ರೂಪಾಯಿ ಕಡಿಮೆಯಾಗಿದ್ದು 66,178 ರೂಪಾಯಿ ಇದೆ. ಬೇಡಿಕೆ ಕಡಿಮೆಯಾಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಇಳಿಕೆಯಾಗಿದೆ ಎಂದು ಹೇಳಲಾಗಿದೆ.