
ನವದೆಹಲಿ: ದೀಪಾವಳಿ ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆಯಾಗಿದೆ.
ಬೆಳ್ಳಿ ದರ ಕೆಜಿಗೆ 898 ರೂಪಾಯಿ ಕಡಿಮೆಯಾಗಿದ್ದು, 62,052 ರೂಪಾಯಿಗೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ ದರ 375 ರೂಪಾಯಿ ಇಳಿಕೆಯಾಗಿದ್ದು, 46,411 ರೂಪಾಯಿಗೆ ಮಾರಾಟವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಪರಿಣಾಮ ಮತ್ತು ರೂಪಾಯಿ ಮೌಲ್ಯ ವೃದ್ಧಿಯಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕಡಿಮೆಯಾಗಿದೆ ಎಂದು ಹೇಳಲಾಗಿದೆ.