
ಬೆಂಗಳೂರು: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ, ಹೆಚ್ಚಿನವರು ಅಕ್ಷಯ ತೃತೀಯ ದಿನದಂದು ತಮ್ಮ ಶಕ್ತ್ಯಾನುಸಾರ ಚಿನ್ನವನ್ನು ಖರೀದಿಸುತ್ತಾರೆ.
ಈಗ ಅಕ್ಷಯ ತೃತೀಯ ಹೊತ್ತಲ್ಲಿ ಚಿನ್ನದ ದರ ಸ್ವಲ್ಪ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಶನಿವಾರ 48,550 ರೂ. ಇದ್ದು ಭಾನುವಾರ 48,400 ರೂ.ಗೆ ಇಳಿಕೆಯಾಗಿದೆ. ಪ್ರತಿ ಗ್ರಾಂಗೆ 15 ರೂಪಾಯಿಯಷ್ಟು ಕಡಿಮೆಯಾಗಿದೆ.
ಮದುವೆ ಸೀಸನ್, ಹಬ್ಬ ಮತ್ತು ಅಕ್ಷಯ ತೃತೀಯ, ಜಾಗತಿಕ ಮಾರುಕಟ್ಟೆ ಪರಿಣಾಮ ಮೊದಲಾದ ಕಾರಣಗಳಿಂದ ಚಿನ್ನದ ದರ ಏರಿಳಿತವಾಗುತ್ತಿದೆ. ಅಕ್ಷಯ ತೃತೀಯದಂದು ಹೆಚ್ಚಿನ ಜನ ಚಿನ್ನ ಖರೀದಿಸುವುದರಿಂದ ಅನೇಕ ಚಿನ್ನಾಭರಣ ಮಾರಾಟಗಾರರು ಆಫರ್ ನೀಡಿದ್ದಾರೆ.