ನವದೆಹಲಿ: ಚಿನ್ನದ ಬೆಲೆ ಮತ್ತೆ ಇಳಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ 480 ರೂ. ಕಡಿಮೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನ 60,070 ರೂ.ಗೆ ಆಗಿದೆ.
ಬೆಳ್ಳಿ ದರ ಕೆಜಿಗೆ 530 ರೂ. ಕಡಿಮೆಯಾಗಿದ್ದು 72,750 ರೂ.ಗೆ ಮಾರಾಟವಾಗಿದೆ. ಫ್ಯೂಚರ್ ಚಿನ್ನ ಖರೀದಿಯಲ್ಲಿ 55 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ 60,090 ರೂ.ಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1975 ಡಾಲರ್ ಇದೆ.