
ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ. ಶುಕ್ರವಾರ ಚಿನ್ನದ ದರ 430 ರೂಪಾಯಿಯಷ್ಟು ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ ದರ ಪ್ರತಿ 10 ಗ್ರಾಂಗೆ 47,130 ರೂ.ಗೆ ಇಳಿಕೆಯಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ದರ 400 ರೂ. ಕಡಿಮೆಯಾಗಿದ್ದು, 43,200 ರೂಪಾಯಿಗೆ ಇಳಿದಿದೆ.
ಕಳೆದ ಮೂರು ದಿನದ ಅವಧಿಯಲ್ಲಿ ಚಿನ್ನದ ದರ 1200 ರೂ.ನಷ್ಟು ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಆದ ಬೆಳವಣಿಗೆಗಳಿಂದ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಇಳಿಕೆಯಾಗ್ತಿದೆ ಎಂದು ಹೇಳಲಾಗಿದೆ.