ನವದೆಹಲಿ: ಚಿನ್ನದ ದರ 480 ರೂ. ಜಿಗಿದು ಸಾರ್ವಕಾಲಿಕ ಗರಿಷ್ಠ 61,780 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 410 ರೂ. ಹೆಚ್ಚಳವಾಗಿದೆ.
ಹೆಚ್.ಡಿ.ಎಫ್.ಸಿ. ಸೆಕ್ಯುರಿಟೀಸ್ ಪ್ರಕಾರ, ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 480 ರೂ. ಜಿಗಿದಿದ್ದು, ಪ್ರತಿ 10 ಗ್ರಾಂಗೆ 61,780 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 61,300 ರೂ. ಇತ್ತು
ಬೆಳ್ಳಿ ಕೂಡ ಪ್ರತಿ ಕೆಜಿಗೆ 410 ರೂಪಾಯಿ ಏರಿಕೆಯಾಗಿ 77,580 ರೂಪಾಯಿಗಳಿಗೆ ತಲುಪಿದೆ.
ದೆಹಲಿ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ 10 ಗ್ರಾಂಗೆ 61,780 ರೂ.ಗೆ ವಹಿವಾಟು ನಡೆಸಿತು, ಪ್ರತಿ 10 ಗ್ರಾಂಗೆ 480 ರೂ. ಏರಿಕೆಯಾಗಿದೆ” ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ, ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಪ್ರತಿ ಔನ್ಸ್ ಗೆ 2,041 USD ಮತ್ತು 25.88 USD ರಂತೆ ವಹಿವಾಟು ನಡೆಸುತ್ತಿದೆ.