ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆ ದರಗಳ ಆಧಾರದ ಮೇಲೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 300 ರೂ.ಗೆ ಜಿಗಿದು 63,100 ರೂ.ಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಈ ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 62,800 ರೂ. ದರ ಇತ್ತು. ಬೆಳ್ಳಿ ಕೂಡ ಪ್ರತಿ ಕಿಲೋಗ್ರಾಂಗೆ 800 ರೂ. ಹೆಚ್ಚಳವಾಗಿ 78,500 ರೂ. ತಲುಪಿದೆ. ಹಿಂದಿನ ಮುಕ್ತಾಯ ದರ ಪ್ರತಿ ಕೆಜಿಗೆ 77,700 ರೂ. ಇತ್ತು.
ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಪ್ರತಿ ಔನ್ಸ್ ಗೆ USD 2,040 ಮತ್ತು USD 24.07 ಕ್ಕೆ ಏರಿಕೆಯಾಗಿದೆ.