ನವದೆಹಲಿ: ಚಿನ್ನಾಭರಣಗಳಿಗೆ ಕಡ್ಡಾಯವಾಗಿ ಹಾಲ್ ಮಾರ್ಕ್ ಹಾಕಲು ವಿಧಿಸಿದ್ದ ಗಡುವನ್ನು 2021ರ ಜೂನ್ 1 ರ ವರೆಗೆ ವಿಸ್ತರಿಸಲಾಗಿದೆ.
ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ ಹಾಲ್ಮಾರ್ಕ್ ವ್ಯವಸ್ಥೆಯನ್ನು ಹಾಕುವುದು ಈಗ ಐಚ್ಛಿಕವಾಗಿದೆ. ಇದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. 2021 ರ ಜನವರಿ 15 ರ ಬಳಿಕ ಕಡ್ಡಾಯವಾಗಿ ಹಾಲ್ ಮಾರ್ಕ್ ಹಾಕಬೇಕೆಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಈಗ ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ ನೀಡಿ, ಚಿನ್ನಾಭರಣ ಮತ್ತು ಕಲಾಕೃತಿಗಳಿಗೆ ಕಡ್ಡಾಯವಾಗಿ ಹಾಲ್ ಮಾರ್ಕ್ ಹಾಕುವ ಗಡುವನ್ನು 2021 ರ ಜೂನ್ 1 ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.