ನವದೆಹಲಿ: ಚಿನ್ನಕ್ಕೆ ಹಾಲ್ ಮಾರ್ಕ್ ಕಡ್ಡಾಯ ಗಡುವನ್ನು ಜೂನ್ 15 ರವರೆಗೆ ವಿಸ್ತರಣೆ ಮಾಡಲಾಗಿದೆ. ದೇಶಾದ್ಯಂತ ಕೊರೋನಾ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಅಡ್ಡಿ ಎದುರಾಗಿದೆ. ಹೀಗಾಗಿ ಯೋಜನೆ ಜಾರಿಗೆ ಸಾಕಷ್ಟು ಸಮಯಾವಕಾಶ ಬೇಕಿರುವುದರಿಂದ ಆಭರಣ ಉದ್ಯಮ ವಲಯದಿಂದ ಕೇಂದ್ರ ಸರ್ಕಾರಕ್ಕೆ ಗಡುವು ವಿಸ್ತರಿಸಬೇಕೆಂದು ಮನವಿ ಮಾಡಲಾಗಿತ್ತು.
ಈ ಕಾರಣದಿಂದ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಲು ಜೂನ್ 1 ರ ಗಡುವನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಚಿನ್ನದ ಗುಣಮಟ್ಟವನ್ನು ಅಳೆಯಲು ಹಾಲ್ ಮಾರ್ಕ್ ಮಾನದಂಡವನ್ನು ಬಳಸಲಾಗುತ್ತದೆ. ಜೂನ್ 15 ರಿಂದ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಹಾಕುವುದು ಕಡ್ಡಾಯವಾಗಿರುತ್ತದೆ.