
ನವದೆಹಲಿ: ಹೊಸವರ್ಷಕ್ಕೆ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಚಿನ್ನದ ದರ 10 ಗ್ರಾಂಗೆ 55 ಸಾವಿರ ರೂಪಾಯಿವರೆಗೂ ತಲುಪಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಹಣದುಬ್ಬರ ಪ್ರಮಾಣ ಏರಿಕೆ, ಅಮೆರಿಕ ಫೆಡರಲ್ ಬ್ಯಾಂಕ್ ಬ್ಯಾಂಕ್ ಬಡ್ಡಿ ದರದಲ್ಲಿ ಹೆಚ್ಚಳ ಸೂಚನೆ ನೀಡಿದ್ದು, ಇವೆಲ್ಲವುಗಳ ಕಾರಣದಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಲಿದೆ. ಇದರಿಂದಾಗಿ ಚಿನ್ನದ ದರ 55 ಸಾವಿರ ರೂಪಾಯಿವರೆಗೂ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಕಳೆದ ಆಗಸ್ಟ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ದರ 10 ಗ್ರಾಂಗೆ 56,200 ರೂಪಾಯಿವರೆಗೂ ತಲುಪಿದ್ದು, ನಂತರ ಇಳಿಮುಖವಾಗಿ ಸದ್ಯ 48,000 ರೂ. ಆಸುಪಾಸಿನಲ್ಲಿದೆ.
ಈಗ ಮತ್ತೆ ಅನೇಕ ದೇಶಗಳಲ್ಲಿ ಕೊರೊನಾ ಸೋಂಕು ಏರುಗತಿಯಲ್ಲಿ ಸಾಗಿದ್ದು, ಲಾಕ್ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. ಹೀಗಾದಲ್ಲಿ ಚಿನ್ನದ ಬೆಲೆ ಮತ್ತೆ ಏರುಗತಿಯಲ್ಲಿ ಸಾಗುತ್ತದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.