ಮುಂಬೈ: ನಾಳೆಯಿಂದ 2021 -22 ನೇ ಸಾಲಿನ ಮೊದಲ ಕಂತಿನ ಚಿನ್ನದ ಬಾಂಡ್ ನೀಡಿಕೆ ಆರಂಭವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ಗ್ರಾಂಗೆ 4,777 ರೂಪಾಯಿ ದರ ನಿಗದಿಪಡಿಸಿದೆ.
ಚಿನ್ನದ ಬಾಂಡ್ ಖರೀದಿಸಲು ಆನ್ಲೈನ್ ಮೂಲಕ ಹಣ ಪಾವತಿ ಮಾಡುವವರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ವಿನಾಯಿತಿ ಸಿಗಲಿದೆ. ಆನ್ಲೈನ್ ಖರೀದಿದಾರರಿಗೆ ಗ್ರಾಂಗೆ 4727 ರೂಪಾಯಿಗೆ ದರ ನಿಗದಿ ಮಾಡಲಾಗಿದೆ.
ಮೇ 17 ರ ಸೋಮವಾರದಿಂದ 21 ರವರೆಗೆ ಚಿನ್ನದ ಬಾಂಡ್ ಖರೀದಿಗೆ ಅವಕಾಶ ನೀಡಲಾಗಿದೆ. ಮೇ 25 ರಂದು ಬಾಂಡ್ ವಿತರಿಸಲಾಗುವುದು. ಆಯ್ದ ಅಂಚೆ ಕಛೇರಿ, ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಅಫ್ ಇಂಡಿಯ, ಎನ್ಎಸ್ಇ, ಬಿಎಸ್ಇಎಸ್ ಮೂಲಕ ಚಿನ್ನದ ಖರೀದಿಸಬಹುದು. ಕನಿಷ್ಠ 1 ಗ್ರಾಂ ಹೂಡಿಕೆ ಇರಲಿದೆ. ವೈಯಕ್ತಿಕ ಖರೀದಿದಾರರು, ಅವಿಭಕ್ತ ಕುಟುಂಬಕ್ಕೆ 4 ಕೆಜಿ, ಟ್ರಸ್ಟ್ ಗಳಿಗೆ 20 ಕೆಜಿ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.