ನವದೆಹಲಿ: ಹೋಳಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಸವರನ್ ಗೋಲ್ಡ್ ಬಾಂಡ್ ಉತ್ತಮ ಅವಕಾಶವಾಗಿದೆ.
ಮಾರ್ಚ್ 6 ರಿಂದ 10 ರವರೆಗೆ ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿಸಬಹುದಾಗಿದೆ. ಒಂದು ಗ್ರಾಂ ಚಿನ್ನಕ್ಕೆ 5561 ರೂ. ನಿಗದಿಪಡಿಸಿದ್ದು, ಹೂಡಿಕೆಯಾಗಿ ಖರೀದಿ ಚಿನ್ನ ಖರೀದಿಸಬಹುದು. ಇದಕ್ಕೆ 2.50 ರೂ. ಬಡ್ಡಿ ನೀಡಲಾಗುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮತ್ತು ಡಿಜಿಟಲ್ ಪಾವತಿ ಮಾಡಿದರೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಾಗುವುದು.
ಒಂದು ಗ್ರಾಂ ಚಿನ್ನಕ್ಕೆ 5561 ರೂ., 10 ಗ್ರಾಂ ಚಿನ್ನಕ್ಕೆ 55,610 ರೂಪಾಯಿ ಆಗಲಿದ್ದು, ಸವರನ್ ಗೋಲ್ಡ್ ಬಾಂಡ್ ವಿತರಣೆಯಾಗುವ ಬೆಲೆಯ ಮೇಲೆ ಶೇ. 2.50 ಬಡ್ಡಿ ನೀಡಲಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಖಾತೆಗೆ ಬಡ್ಡಿ ಜಮಾ ಮಾಡಲಾಗುತ್ತದೆ.
ಸರ್ಕಾರಿ ಬಾಂಡ್ ಆಗಿರುವ ಸವರನ್ ಗೋಲ್ಡ್ ಬಾಂಡ್ ಅನ್ನು ಆರ್‌ಬಿಐ ಬಿಡುಗಡೆ ಮಾಡಲಿದ್ದು, ಡಿಮ್ಯಾಟ್ ರೂಪದಲ್ಲಿ ಇದನ್ನು ಪರಿವರ್ತಿಸಬಹುದು. ಚಿನ್ನದ ತೂಕಕ್ಕೆ ಇದು ಯೋಗ್ಯವಾಗಿರುತ್ತದೆ. ಸವರನ್ ಗೋಲ್ಡ್ ಬಾಂಡ್ ಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಅಂಚೆ ಕಚೇರಿ, ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಲ್ಲಿ ಖರೀದಿಸಬಹುದು.