alex Certify ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್: ಅಗತ್ಯವಿದ್ದಾಗ ಸಿಗ್ತಿಲ್ಲ ಲೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್: ಅಗತ್ಯವಿದ್ದಾಗ ಸಿಗ್ತಿಲ್ಲ ಲೋನ್

ಸವರಿನ್ ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಅಗತ್ಯವಾದ ಸಂದರ್ಭದಲ್ಲಿ ಸಾಲವೇ ಸಿಗುತ್ತಿಲ್ಲ. ಭೌತಿಕ ಬಂಗಾರದ ಅವಲಂಬನೆ ಕಡಿಮೆ ಮಾಡಲು 2015 ರಲ್ಲಿ ಕೇಂದ್ರ ಸರ್ಕಾರ ಸವರಿನ್ ಗೋಲ್ಡ್ ಬಾಂಡ್ ಯೋಜನೆ ಜಾರಿಗೆ ತಂದಿದೆ.

ಚಿನ್ನದ ಆಮದು ಕಡಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಅಗತ್ಯವಿದ್ದಾಗ ಸಾಲ ಪಡೆಯಲು ಹೋದರೆ, ಯಾವುದೇ ಬ್ಯಾಂಕುಗಳು ಈ ಬಾಂರ್ ಗಳನ್ನು ಅಡವಿಟ್ಟುಕೊಂಡು ಸಾಲ ಕೊಡುತ್ತಿಲ್ಲ.

ಬ್ಯಾಂಕ್, ಪೋಸ್ಟ್ ಆಫೀಸ್, ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳ ಮೂಲಕ ಸವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಯೋಜನೆಯಡಿ ವೈಯಕ್ತಿಕ ಹೂಡಿಕೆದಾರರು ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಗ್ರಾಂ, ಗರಿಷ್ಠ 4ಕೆಜಿ ಚಿನ್ನ ಹೂಡಿಕೆ ಮಾಡಬಹುದು. ಒಂದು ಸಲ ಬಾಂಡ್ ಖರೀದಿಸಿದರೆ 8 ವರ್ಷದವರೆಗೆ ಮಾರಾಟ ಮಾಡುವಂತಿಲ್ಲ. ಸರ್ಕಾರ ವಾರ್ಷಿಕ 2.5 ರಷ್ಟು ಬಡ್ಡಿ ನೀಡಲಿದೆ. ಚಿನ್ನವನ್ನು ಮನೆಯಲ್ಲಿಟ್ಟುಕೊಳ್ಳುವುದಕ್ಕಿಂತ ಸುರಕ್ಷಿತವೆಂದು ಭಾವಿಸಿದ ಜನ ಬಾಂಡ್ ಖರೀದಿಸುತ್ತಾರೆ.

ಇದಕ್ಕೆ ಚಿನ್ನದಷ್ಟೇ ಮೌಲ್ಯವಿದೆ ಎಂದು ಹೇಳಲಾಗಿದೆ. ಆದರೆ, ಈ ಬಾಂಡ್ ಗಳನ್ನು ಗಿರವಿ ಇಡಲು ಹೋದರೆ ಸಾಲ ಸಿಗುತ್ತಿಲ್ಲ. ಸವರಿನ್ ಗೋಲ್ಡ್ ಬಾಂಡ್ ಇಟ್ಟುಕೊಂಡು ಚಿನ್ನದ ಸಾಲ ನೀಡುವ ಕುರಿತು ಮಾರ್ಗಸೂಚಿ ಬಂದಿಲ್ಲವೆಂದು ಹೇಳಲಾಗಿದೆ.

ಚಿನ್ನದ ಸಾಲಕ್ಕೆ ಇರುವ ನಿಯಮಗಳು ಗೋಲ್ಡ್ ಬಾಂಡ್ ಗೆ ಅನ್ವಯವಾಗಲ್ಲ. ಡಿಮ್ಯಾಟ್ ಖಾತೆ ಹೊಂದಿದ ಗ್ರಾಹಕರಿಗೆ ಅನುಕೂಲವಾಗುತ್ತದೆ. ಇಲ್ಲದವರಿಗೆ ಬಾಂಡ್ ನೀಡಿ ಸಾಲ ಪಡೆಯಲು ಸಮಸ್ಯೆಯಾಗುತ್ತದೆ. ಕೆಲವು ಬ್ಯಾಂಕ್ ಸಾಲ ನೀಡಿದರೂ ಅಲ್ಪ ಮೊತ್ತ ಕೊಡುತ್ತವೆ. ಅದಕ್ಕೆ ದುಬಾರಿ ಬಡ್ಡಿ ಕಟ್ಟ ಬೇಕು. ಅದಕ್ಕಿಂತ ನೇರವಾಗಿ ಚಿನ್ನ ಗಿರವಿ ಇಟ್ಟರೆ ಹೆಚ್ಚಿನ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...