
ನವದೆಹಲಿ: ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪ್ರತಿ ಗ್ರಾಂ ಚಿನ್ನಕ್ಕೆ 5000 ರೂ. ನಿಗದಿ ಮಾಡಲಾಗಿದ್ದು, ಡಿಸೆಂಬರ್ 28 ರ ಇಂದಿನಿಂದ ಜನವರಿ 1 ರ ವರೆಗೆ ಚಿನ್ನದ ಬಾಂಡ್ ಗಳು ಲಭ್ಯವಿರುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಗೋಲ್ಡ್ ಬಾಂಡ್ ಸರಣಿಯ 9 ನೇ ಹಂತದ ನೋಂದಣಿ ಇಂದಿನಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರದ ಗೋಲ್ಡ್ ಬಾಂಡ್ ಯೋಜನೆಗೆ ಜನವರಿ 1 ರವರೆಗೆ ನೋಂದಾಯಿಸಿಕೊಳ್ಳಬಹುದು.
ಆನ್ಲೈನ್ನಲ್ಲಿ ಯೋಜನೆಗೆ ನೊಂದಾಯಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಆನ್ಲೈನ್ ಗ್ರಾಹಕರು 1 ಗ್ರಾಂಗೆ 4950 ರೂಪಾಯಿ ಪಾವತಿಸಬಹುದು ಎಂದು ಹೇಳಲಾಗಿದೆ.