ಕೋವಿಡ್ 19 ಹಲವು ಉದ್ಯಮದ ಸ್ವರೂಪವನ್ನೇ ಬದಲಿಸುತ್ತಿದೆ. ಇದೀಗ ಕುರಿ ವ್ಯಾಪಾರ ಕೂಡ ಆನ್ ಲೈನ್ ಮೂಲಕ ಆಗುತ್ತಿದೆ.
ಕುರಿ ವ್ಯಾಪಾರ ಸಾಮಾನ್ಯವಾಗಿ ಬಯಲು ಮಾರುಕಟ್ಟೆಯಲ್ಲಿ ನಡೆಯುತ್ತದೆ, ಕೊರೊನಾ ವ್ಯಾಪಕವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆಗಳನ್ನೇ ರದ್ದು ಮಾಡಲಾಗುತ್ತಿದೆ.
ಇಷ್ಟೇ ಅಲ್ಲದೆ ಆಗಸ್ಟ್ 1ರಂದು ದೇಶದ ಹೆಚ್ಚಿನ ಭಾಗಗಳಲ್ಲಿ ಬಕ್ರೀದ್ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ಮುಸ್ಲಿಮರು ಮೇಕೆ, ಕುರಿಯನ್ನು ಬಲಿ ನೀಡುತ್ತಾರೆ ಮತ್ತು ಮಾಂಸವನ್ನು ಕುಟುಂಬ ಮತ್ತು ಸ್ನೇಹಿತರಿಗೆ ವಿತರಿಸುತ್ತಾರೆ.
ಇನ್ನೊಂದು ವಾರದಲ್ಲೇ ಬಕ್ರೀದ್ ಇದೆ. ಆದರೆ ಕುರಿ ವ್ಯಾಪಾರಕ್ಕೆ ಕೊರೊನಾ ಅಡ್ಡಿಯಾಗಿದೆ. ಇದು ವ್ಯಾಪಾರಿಗಳಲ್ಲೂ ಭಯ ಹುಟ್ಟಿಸಿದ್ದು, ಮಾರಾಟಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ.
ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರ ಎಂಬಂತೆ ಮುಂಬೈನಲ್ಲಿ ಆನ್‌ಲೈನ್‌ನಲ್ಲಿ ಮಾರಾಟ ಶುರುವಾಗಿದೆ. ಜೋಗೇಶ್ವರಿಯಲ್ಲಿರುವ ಹಾಜಿ ಮೇಕೆ ಫಾರ್ಮ್ ಆನ್ ಲೈನ್ ವ್ಯಾಪಾರ ಪ್ರಾರಂಭಿಸಿದ್ದು, ಗ್ರಾಹಕರಿಗೆ ಆಡುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ.
ಗ್ರಾಹಕರು ಆಡುಗಳ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು ಮತ್ತು ಅವರಿಗೆ ಬೇಕಾದುದನ್ನು ಆರಿಸಿಕೊಳ್ಳಬಹುದು. ನಂತರ ನಾವು ನೇರವಾಗಿ ಅವರ ಮನೆಗಳಿಗೆ ತಲುಪಿಸುತ್ತೇವೆ ಎಂದು ಮೇಕೆ ವ್ಯಾಪಾರಿ ವಸೀಮ್ ಖಾನ್ ಹೇಳಿದ್ದಾರೆ.