
ವಿಶ್ವದಾದ್ಯಂತ ಜಿ ಮೇಲ್ ಕಳಿಸಲು ಸಮಸ್ಯೆ ಎದುರಾಗಿದೆ. ಇಮೇಲ್ ನಲ್ಲಿ ಅಟ್ಯಾಚ್ಮೆಂಟ್ ಕಳಿಸಲು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಟ್ಯಾಚ್ಮೆಂಟ್ ಜೊತೆ ಕಳುಹಿಸಲಾಗುತ್ತಿರುವ ಇಮೇಲ್ ಸರಿಯಾಗಿ ಸೆಂಡ್ ಆಗ್ತಿಲ್ಲ.
ಡೌನ್ ಡಿಟೆಕ್ಟರ್ ವೆಬ್‌ಸೈಟ್ ಪ್ರಕಾರ, ಪ್ರಪಂಚದಾದ್ಯಂತದ ಬಳಕೆದಾರರು ಇದರ ಬಗ್ಗೆ ದೂರು ನೀಡುತ್ತಿದ್ದಾರೆ. ಗೂಗಲ್ ಅಪ್ಲಿಕೇಶನ್‌ನ ಪುಟದಲ್ಲಿ ನವೀಕರಣವಿದ್ದು, ಅದ್ರಲ್ಲಿ ಸಮಸ್ಯೆಗಳಿವೆ ಎಂದು ದೃಢಪಡಿಸಲಾಗಿದೆ. ಸಮಸ್ಯೆ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲಾಗ್ತಿದೆ. ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಕಂಪನಿ ಹೇಳಿದೆ.
ಜಿಮೇಲ್ ಸಮಸ್ಯೆ ಭಾರತದಲ್ಲೂ ಶುರುವಾಗಿದೆ. ಬೆಳಿಗ್ಗೆ 11 ಗಂಟೆ ನಂತ್ರ ಭಾರತದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಜನರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದೂರು ನೀಡ್ತಿದ್ದಾರೆ. ಸಮಸ್ಯೆ ಎಲ್ಲಿಯಾಗ್ತಿದೆ ಎನ್ನುವ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಇಮೇಲ್ ಲಾಗಿನ್ ಗೆ ಯಾವುದೇ ಸಮಸ್ಯೆಯಾಗಿಲ್ಲ. ಅಟ್ಯಾಚ್ಮೆಂಟ್ ಕಳಿಸಲು ಮಾತ್ರ ಸಮಸ್ಯೆಯಾಗ್ತಿದೆ.