ಶಿವಮೊಗ್ಗ: ಶುಂಠಿ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಒಣಶುಂಠಿ ದರ ಕ್ವಿಂಟಾಲ್ ಗೆ 23 ಸಾವಿರ ರೂಪಾಯಿವರೆಗೂ ಏರಿಕೆಯಾಗಿದೆ.
ಲಾಕ್ಡೌನ್ ಜಾರಿಯಾದ ಕಾರಣ ಹೊರರಾಜ್ಯಗಳಿಗೆ ಶುಂಠಿ ಸಾಗಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಬೇಡಿಕೆ ಕುಸಿದು ಬೆಲೆ ಇಳಿಕೆಯಾಗಿತ್ತು. ಹಸಿ ಶುಂಠಿ ಕ್ವಿಂಟಾಲ್ ಗೆ 3500 ರೂಪಾಯಿಗೆ ಇಳಿದಿತ್ತು.
ಲಾಕ್ಡೌನ್ ಸಡಿಲಿಕೆಯಾಗಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಶುಂಠಿ ದರದಲ್ಲಿ ಹೆಚ್ಚಳವಾಗಿದೆ. ಹಸಿ ಶುಂಠಿ ಕ್ವಿಂಟಾಲ್ ಗೆ 6000 ರೂ.ವರೆಗೂ ದರ ಬಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಹೆಕ್ಟೇರ್ ನಲ್ಲಿ ಶುಂಠಿ ಬೆಳೆಯಲಾಗುತ್ತಿದ್ದು ವಾರ್ಷಿಕ ಸುಮಾರು 50 ಸಾವಿರ ಟನ್ ಶುಂಠಿ ಉತ್ಪಾದನೆ ಮಾಡಲಾಗುತ್ತದೆ. ಪ್ರಸ್ತುತ ದರ ಏರಿಕೆಯಾಗಿದ್ದು, ಹಸಿಶುಂಠಿ ಧಾರಣೆ ಕ್ವಿಂಟಾಲ್ ಗೆ 6 ಸಾವಿರ ರೂ., ಒಣಶುಂಠಿ ಕ್ವಿಂಟಾಲ್ ಗೆ 23 ಸಾವಿರಕ್ಕೆ ಏರಿಕೆಯಾಗಿದೆ.