ದೊಡ್ಡ ಹೂಡಿಕೆ ಮಾಡದೇ ಭಾರೀ ಮೊತ್ತದ ರಿಟರ್ನ್ಸ್ ಬೇಕೇ? ಹಾಗಿದ್ದರೆ ಇಗೋ ಇಲ್ಲಿದೆ ಗ್ರಾಮ ಸುಮಂಗಲಿ ಗ್ರಾಮೀಣ ಅಂಚೆ ಜೀವ ವಿಮಾ. ಈ ಸ್ಕೀಂನಲ್ಲಿ ಗ್ರಾಹಕರು ಪ್ರತಿನಿತ್ಯ 95 ರೂ.ಗಳ ಹೂಡಿಕೆ ಮಾಡಿ 14 ಲಕ್ಷ ರೂ.ಗಳವರೆಗೂ ರಿಟನ್ಸ್ ಪಡೆಯಬಹುದಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಮಂದಿಗೆ 1995ರಲ್ಲಿ ಈ ಸ್ಕೀಂ ತರಲಾಗಿದ್ದು, ಹೂಡಿಕೆ ಮೇಲಿನ ರಿಟರ್ನ್ಸ್ ಜೊತೆಗೆ ಜನರು ಅದರ ಮೇಲೆ ವಿಮಾ ಕವರ್‌ಅನ್ನೂ ಪಡೆದುಕೊಳ್ಳಬಹುದಾಗಿದೆ. ಒಳ್ಳೆಯ ರಿಟರ್ನ್ಸ್ ಕೊಡುವ ಆರು ಗ್ರಾಮೀಣ ಅಂಚೆ ಜೀವ ವಿಮಾ ಸ್ಕೀಂಗಳ ಪೈಕಿ ಗ್ರಾಮ ಸುಮಂಗಲವೂ ಒಂದಾಗಿದೆ.
ಕಾಲಕಾಲಕ್ಕೆ ರಿಟರ್ನ್ಸ್ ನೋಡುತ್ತಿರುವ ಮಂದಿಗೆ ಈ ಸ್ಕೀಂ ಬಹಳ ಅನುಕೂಲಕರವಾಗಿದ್ದು, ಪಾಲಿಸಿದಾರರಿಗೆ ಕಾಲಕಾಲಕ್ಕೆ ರಿಟರ್ನ್ಸ್ ತಲುಪಿಸಲಾಗುತ್ತದೆ. ಒಂದು ವೇಳೆ ಪಾಲಿಸಿದಾರರು ಸಹಜ ಸಾವಿಗೆ ತುತ್ತಾದರೆ ಅವರು ನಾಮಿನೀ ಎಂದು ತೋರಿದ್ದ ವ್ಯಕ್ತಿಗೆ, ಪೂರ್ಣ ಮೊತ್ತ ಹಾಗೂ ಅದರ ಮೇಲೆ ಜಮೆಯಾದ ಬೋನಸ್‌ನೊಂದಿಗೆ ವಿಮಾ ಮೊತ್ತವನ್ನೂ ಕೊಡಲಾಗುತ್ತದೆ.
ಗ್ರಾಮ ಸುಮಂಗಲಿ ಯೋಜನೆಯನ್ನು 15 ಹಾಗೂ 20 ವರ್ಷಗಳ ಮಟ್ಟಿಗೆ ಪಡೆದುಕೊಳ್ಳಬಹುದಾಗಿದೆ. 15 ವರ್ಷಗಳ ಸ್ಕೀಂ ಪಡೆಯಲು ಇರುವ ಕನಿಷ್ಠ ವಯೋಮಿತಿ 19 ವರ್ಷಗಳಾದರೆ ಗರಿಷ್ಠ ವಯೋಮಿತಿ 45 ವರ್ಷಗಳು. 20 ವರ್ಷಗಳ ಸ್ಕೀಂ ಯೋಜನೆಗೆ ಗರಿಷ್ಠ ವಯೋಮಿತಿ 40 ವರ್ಷಗಳು.
15 ವರ್ಷಗಳ ಗ್ರಾಮ ಸುಮಂಗಲಿ ಸ್ಕೀಂನಲ್ಲಿ ಹೂಡಿಕೆ ಹಾಗೂ ರಿಟರ್ನ್ಸ್‌ನ 20 ಪ್ರತಿಶತದಷ್ಟು ಹಣವನ್ನು 6, 9 ಹಾಗೂ 12 ವರ್ಷಗಳ ಬಳಿಕ ಕೊಡಲಾಗುವುದು. ಉಳಿದ 40% ಹಣವನ್ನು ಸ್ಕೀಂನ ಮೆಚ್ಯೂರಿಟಿ ಅವಧಿ ಮುಗಿದಾಗ ಹೂಡಿಕೆದಾರರಿಗೆ ಕೊಡಲಾಗುವುದು.