ದೇಶದಲ್ಲಿ ಡಿಜಿಟಲ್ ಪಾವತಿಯ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಡಿಜಿಟಲ್ ಪಾವತಿ ಸುಲಭವಾಗಿದ್ದು, ಇದ್ರಿಂದ ಗ್ರಾಹಕರಿಗೆ ಲಾಭವಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ರೀಚಾಜ್ ಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಭಿನ್ನ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಮೊಬೈಲ್ ಅಪ್ಲಿಕೇಷನ್ ಮೂಲಕ ರೀಚಾರ್ಜ್, ಹಣ ವರ್ಗಾವಣೆ ಮಾಡುವ ವೇಳೆ ಗ್ರಾಹಕರು ಕ್ಯಾಶ್ ಬ್ಯಾಕ್ ಗೆ ಆದ್ಯತೆ ನೀಡ್ತಾರೆ.
ಆನ್ಲೈನ್ ಪಾವತಿ ಅಪ್ಲಿಕೇಶನ್ ಗೂಗಲ್ ಪೇನಲ್ಲಿ, ಆಕ್ಸಿಸ್ ಬ್ಯಾಂಕಿನ ಎಸಿಇ ಕ್ರೆಡಿಟ್ ಕಾರ್ಡ್ ಮೂಲಕ ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಶೇಕಡಾ 5 ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಈ ಕ್ಯಾಶ್ಬ್ಯಾಕ್ನಲ್ಲಿ ಯಾವುದೇ ಕ್ಯಾಪಿಂಗ್ ಇಲ್ಲ. ತಿಂಗಳಲ್ಲಿ 10 ಸಾವಿರ ರೂಪಾಯಿಗಳ ರಿಚಾರ್ಜ್ ಮಾಡಿದ್ರೆ 500 ರೂಪಾಯಿ ಕ್ಯಾಶ್ಬ್ಯಾಕ್ ಸಿಗುತ್ತದೆ.
ಇತ್ತೀಚೆಗೆ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ ಗೂಗಲ್ ಪೇ ಮತ್ತು ವೀಸಾದೊಂದಿಗೆ ಭಾರತದಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿದ್ರೆ ವಿಶೇಷ ಲಾಭ ಸಿಗಲಿದೆ. ಈ ಕ್ರೆಡಿಟ್ ಕಾರ್ಡ್ ನ ಸೇರ್ಪಡೆ ಶುಲ್ಕ 499 ರೂಪಾಯಿ. ಈ ಕಾರ್ಡಿನ ವಾರ್ಷಿಕ ಶುಲ್ಕ 499 ರೂಪಾಯಿ.
ಮಾಹಿತಿಯ ಪ್ರಕಾರ, ಬಳಕೆದಾರರು ಈ ಕಾರ್ಡ್ನಿಂದ ಹಣ ಪಾವತಿ ಮಾಡಿದ್ರೆ ಶೇಕಡಾ 2 ರಿಂದ ಶೇಕಡಾ 5ರಷ್ಟು ಕ್ಯಾಶ್ಬ್ಯಾಕ್ ಪಡೆಯುತ್ತಾರೆ. ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಬಿಲ್ ಪಾವತಿಗಾಗಿ ಗೂಗಲ್ ಪೇನಲ್ಲಿ ಅನಿಯಮಿತ ಶೇಕಡಾ 5 ರಷ್ಟು ಕ್ಯಾಶ್ಬ್ಯಾಕ್ ಲಭ್ಯವಿರುತ್ತದೆ. ಸ್ವಿಗ್ಗಿ, ಜೊಮಾಟೊ ಮತ್ತು ಓಲಾ ಪಾವತಿಗೆ ಶೇಕಡಾ 4 ರಷ್ಟು ಕ್ಯಾಶ್ಬ್ಯಾಕ್ ಸಿಗುತ್ತದೆ.